ಇದೊಂದು ತಂತ್ರಜ್ಞರೆಲ್ಲ ಸೇರಿ ನಿರ್ಮಾಣ ಮಾಡುತ್ತಿರುವ ಸಿನೆಮಾ ‘ಡಾರ್ಲಿಂಗ್’ ಶೀಘ್ರದಲ್ಲೇ ೬೦ ರಷ್ಟು ಚಿತ್ರೀಕರಣವನ್ನು ಮುಗಿಸಿ ಬೆಂಗಳೂರಿನ ಭಾಗದ ಚಿತ್ರೀಕರಣವನ್ನು ಕ್ಯಾಮರದಲ್ಲಿ ತುಂಬಿಕೊಂಡಿದೆ.
ರಾಜ ರಾಜೇಶ್ವರಿ ನಗರದಲ್ಲಿ ಚಿತ್ರದ ಶೀರ್ಷಿಕೆ ಗೀತೆಯನ್ನು ಹಾಗೂ ಎರಡು ಸಾಹಸ ಸನ್ನಿವೇಶಗಳನ್ನು ಚಿತ್ರಕ್ಕೆ ಪೂರ್ತಿಗೊಳಿಸಲಾಗಿದೆ ಎಂದು ನಿರ್ದೇಶಕ ಸಂತು ತಿಳಿಸುತ್ತಾರೆ.
ಎಸ್ ಟೀಮ್ ಹಾಗೂ ಸಾಮಿ ಅಸ್ಸೋಸಿಯಟ್ ನಿರ್ಮಾಣದ ಈ ಚಿತ್ರದ ಛಾಯಾಗ್ರಾಹಕ ಮಂಜುನಾಥ್ ನಾಯಕ್, ನಿರ್ದೇಶಕ ಸಂತು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟ ಯೋಗೇಶ್ ಅವರುಗಳೆ ನಿರ್ಮಾಪಕರುಗಳು.
ಅಲೆಮಾರಿಯಿಂದ ಜನಪ್ರಿಯತೆ ಗಳಿಸಿ, ‘ಡವ್’ ಸಿನೆಮಾ ಬಿಡುಗಡೆ ಹಂತದಲ್ಲಿ ಇರುವಾಗ ಸಂತು ಅವರು ‘ಡಾರ್ಲಿಂಗ್’ ಸಿನೆಮಾ ಪ್ರಾರಂಬಿಸಿದ್ದಾರೆ. ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಇದೆ. ಯುವ ಜನತೆಗೆ ಸಿನೆಮಾ ಮಾಡಿದರೆ ಮನೆ ಮಂದಿಯೆಲ್ಲಾ ಸೇರಿ ಸಿನೆಮಾ ನೋಡುವುದು ಸಾಧ್ಯ ಎಂದು ಅವರು ನಂಬಿದ್ದಾರೆ.
ಯೋಗೀಶ್ ಅವರಿಗೆ ನಾಯಕಿ ಆಗಿ ಮುಕ್ತ ಪರಭಾಷೆಯಿಂದ ಆಗಮಿಸಿದ್ದಾರೆ. ಮಂಜು ಮಾಂಡವ್ಯಅವರ ಸಂಭಾಷಣೆ, ಮಾಸ್ ಮಾಧ ಅವರ ಸಾಹಸ ಈ ಚಿತ್ರಕ್ಕೆ ಇದೆ.